Mystery

ಚಿದಂಬರ ರಹಸ್ಯ, ಲೇಖಕ ಕೆ ಪಿ ಪೂರ್ಣಚಂದ್ರ ತೇಜಸ್ವಿ (Chidambara Rahasya, by K P Poornachandra Tejaswi)

For translation of the review in English, please scroll down.

ವಿಮರ್ಶೆ ಬರೆದವರು ಶ್ರೀಹರ್ಷ ಡಿ ವಿ

ಭಾರತ ಎಂಬ ಒಂದು ಬೃಹತ್ ರಾಷ್ಟ್ರದ ಜನರ ವರ್ತನೆ ಅರ್ಥವಾಗಲು ಭಾರತದ ಒಂದು ಸಣ್ಣ ಹಳ್ಳಿಗೆ ಭೇಟಿ ನೀಡಿದರು ಸಾಕೆನ್ನುವ ಅರ್ಥ ನಮ್ಮ ತೇಜಸ್ವಿ ಅವರ “ಚಿದಂಬರ ರಹಸ್ಯ” ಕಾದಂಬರಿಯನ್ನು ಓದಿದಾಗ ಅರಿವಾಗುತ್ತದೆ.
ಭಾರತದಲ್ಲಿ ಆಗಿನ ದಿನಗಳಲ್ಲಿ ಮತ್ತು ಈಗಿನ ದಿನಗಳಲ್ಲಿ ಕಾಣಸಿಗುವ ಜಾತಿಭೇದ, ವೈಷಮ್ಯ, ಹಿಂದೂ-ಮುಸಲ್ಮಾನ ಗಲಬೆ ಗಲಾಟೆಗಳು, ಮೂಡನಂಬಿಕೆಗಳು, ಹಾದರ, ಆಸೆಗೀಡಾದ ಮನುಷ್ಯನು ಪರಿಸರದ ಮೇಲೆಸಗಿರುವ ಹಲ್ಲೆಯ ಪರಿಣಾಮ, ದರೋಡೆ, ಸುಲಿಗೆ, ಮಾರ್ಕ್ಸ್ ವಾದದ ಅನರ್ಥಮಂಡನೆಯಿಂದಾಗುವ ಯುವಕರ ಅಹಿತಕರ ಮನಪರಿವರ್ಥನೆ ಹೀಗೆ ಹಲವಾರು ಸಾಮಾಜಿಕ ಕಹಿಸತ್ಯಗಳನ್ನು ತಿಳಿಹಾಸ್ಯದ ಮೂಲಕ ಮನವರಿಕೆ ಮಾಡಿಕೊಡುವ ತೇಜಸ್ವಿ ಅವರ ಈ ಪ್ರಯತ್ನ ಕನ್ನಡ ಸಾಹಿತ್ಯದ ಒಂದು ಬಹುಮುಖ್ಯ ಕಾದಂಬರಿಗಳಲ್ಲಿ ಒಂದನ್ನಾಗಿ ಮಾಡಿದೆ.
ಹಾಗೆಯೆ ಹೆಸರಿನಲ್ಲಿರುವಂತೆ ಒಂದು ರಹಸ್ಯಾನ್ವೇಷಣೆಯ ಮೂಲಕವೇ ಈ ಮುಂಚೆ ತಿಳಿಸಿದ ಎಲ್ಲ ವಿಷಯಗಳ ಮೇಲೆ ಬೆಳಕು ಪಸರಿಸುತ್ತದೆ. ಆ ಊರಿಗೆ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ ಆಗಿ ಬರುವ ಶಾಮನಂದನ ಅಂಗಾಡಿ ಉರ್ಫ್ ಶಾಮೇಗೌಡ ಮತ್ತವರ ಏಲಕ್ಕಿಯ ಉತ್ಪಾದನೆಯ ಕುಸಿತದ ವಿಷಯವಾಗಿನ ತನಿಖೆ ಕಥೆಯ ರೋಚಕತೆಯನ್ನು ಹೆಚ್ಚಿಸುತ್ತದೆ. ಎಂದಿನಂತೆ ತೇಜಸ್ವಿ ಅವರು ಈ ಕಾದಂಬರಿಯಲ್ಲೂ ತಿಳಿಹಾಸ್ಯವನ್ನು ನಿರೂಪಣೆಗೆ ಬಳಸಿಕೊಂಡಿರುತ್ತಾರೆ.
ಈ ಕಾದಂಬರಿಯನ್ನು ಓದಲಿಚ್ಚಿಸುವವರಿಗೆ ತಕ್ಕಮಟ್ಟಿಗೆ ಏಲಕ್ಕಿ ಸಸಿಯ ಟಿಶ್ಯೂ ಕಲ್ಚರ್, ಕಾಡಿನ ನಾಶದಿಂದಾಗುವ ಅನಾಹುತಗಳು, ಲಂಟಾನದ ಮರಗಳ ತೊಂದರೆಗಳ ಬಗ್ಗೆಯೂ ಜ್ಞಾನ ಸಿಗುವುದು ನಿಜ. ನನ್ನಂಥ ಕೆಲವರಿಗೆ ಕೃಷಿಯನ್ನು ಅವಲಂಬಿಸುವ ನಿಟ್ಟಿನಲ್ಲಿ ಪ್ರೇರೇಪಣೆ ಸಿಕ್ಕಿದ್ದು ನಿಜವೆ ಅನ್ನಿ.  ಒಟ್ಟಿನಲ್ಲಿ ಇದೊಂದು ಅದ್ಭುತ ಜ್ಞಾನಸಂಪದ.
Translation of the above given review to English:
Review by Sriharsha D V
You don’t have to visit every village in India to get a hang of what happens within it. A visit to a small village in it will open the Pandora’s box. And this novel by K P Poornachandra Tejaswi, one of the foremost new-age kannada writers, gives an overview of the India we live in.
The social illnesses that existed then and to a good extent now like casteism, religion based issues, robberies, prostitution, reckless deforestation for wealth gain and to create differences and rivalry, Marxism’s wayward interpretations and their effect on the youth trying to imbibe them etc., they all find place in this book. The book has powerful depictions of all the above issues and the story is told laden with soft humour.
Rahasya means secret and as the name suggests, there is a secret in this story. While unearthing the key to this secret we see all the issues. Shamanandan Angaadi aka Shamegowda, an intelligence bureau officer visiting his native to find out the reason behind the constant and alarming decrease in the cardamom production of this region is the principle character who adds the required nail-biting suspense moments through the novel.
A person willing to spend time on reading this novel will get to know a lot about tissue culture in cardamom, effects of deforestation, the adverse effects of the invasive weed, Lantana camara, that has spread big within the western ghats etc. And it would inspire few people, like me, interested in practicing and promoting agriculture too.
Do give it a read and according to me, it should not be missed!