ವಿಮರ್ಶಕರು ಶ್ವೇತಾ ಏಚ್ ಎಸ್
ಶೈಲಿ: ವಸ್ತುಭೂತವಾದ ವಿಷಯ, ಸಣ್ಣ ಕಥೆಗಳು, LGBTQ.
ಮುದ್ರೆ: ಚಂದ ಪುಸ್ತಕ
ISBN: 9789384908249
ವಸುಧೇಂದ್ರ ಒಬ್ಬ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರೂ ಅವರ ಕನ್ನಡ ಪ್ರೇಮ ಅವರಲ್ಲಿನ ಒಬ್ಬ ಕುಶಲ ಬರಹಗಾರನನ್ನು ಹೂರಹಾಕಿದೆ. ಇವರ ಕೃತಿಗಳು ಪ್ರಮುಖವಾಗಿ ಸಣ್ಣ ಕಥೆಗಳು ಹಾಗು ಪ್ರಬಂಧಗಳಾಗಿವೆ. ಕಾದಂಬರಿ ಕೂಡ ರಚಿಸಿದ್ದಾರೆ. “ಮೋಹನಸ್ವಾಮಿ” ಏಕೆ ವಿಶೇಷವೆಂದರೆ, ಅದು ಪ್ರಸ್ತುತ ಕನ್ನಡ ಸಾಹಿತ್ಯ ಲೋಕದಲ್ಲಿ ಮೊದಲ ಬಾರಿಗೆ ಸಲಿಂಗಕಾಮಿಯ ಪಾತ್ರದ ಸುತ್ತ ನಾಭೀಕರಿಸಿರುವ ಒಂದು ಕೃತಿ. ಈ ಪುಸ್ತಕವು ಲೇಖಕರ ಸ್ವಯಂ ಬಹಿರಂಗಬಡಿಸುವಿಕೆ ಎಂದೂ ನಂಬಲಾಗಿದೆ.
ಮೋಹನಸ್ವಾಮಿ ಹನ್ನೊಂದು ಸಣ್ಣ ಕಥೆಗಳು ಹಾಗು ಒಂದು ಪದ್ಯವನ್ನೊಳಗೊಂಡಿದೆ. ಅದರಲ್ಲಿ ಆರು ಕಥೆಗಳು ಮೋಹನಸ್ವಾಮಿಯ ಕುರಿತಾಗಿದ್ದು ಮಿಕ್ಕವು ಬೇರೆ ಪಾತ್ರಗಳನ್ನು ನಿರೂಪಿಸುತ್ತವೆ. ‘ತುತ್ತತುದಿಯಲ್ಲಿ ಮೊಟ್ಟಮೊದಲು’ ಮೋಹನಸ್ವಾಮಿಯ ಪರಿಚಯಾತ್ಮಕ ಕಥೆಯಾಗಿದ್ದು ಲಿಂಗ ಬದಲಾವಣೆಯ ನಂತರದ ಸಾಮಾಜಿಕ ಜೀವನದಲ್ಲಿ ತನ್ನ ಸತತ ನೋವಿನ ಸೆಲೆಯನ್ನು, ಅಪರಾಧಿ ಮನೋಭಾವನೆಯನ್ನು ಮುಂದಿಡುತ್ತದೆ. ‘ಕಗ್ಗಂಟು’ ಮೋಹನಸ್ವಾಮಿಯು ತನ್ನ ಪ್ರೇಯಸಿಯನ್ನು ಕಳೆದುಕೊಳ್ಳುವ ಹಾಗು ಒಂದು ಹುಡುಗಿಯ ಒಡನಾಟದ ಬಗ್ಗೆಯಾಗಿದೆ. ‘ಕಾಶಿವೀರರು’ ಬಾಲ್ಯದಲ್ಲಿ ಮೋಹನಸ್ವಾಮಿಯು ಹೇಗೆ ಅವನ ಸ್ನೇಹಿತನಿಂದ ಹಣಕ್ಕಾಗಿ ಬೆದರಿಸಲ್ಪಡುತ್ತಾನೆ ಎಂಬುದಾಗಿದೆ. ‘ಒಲ್ಲದ ತಾಂಬೂಲ’ ಮೋಹನಸ್ವಾಮಿಯ ಅಂತರಂಗದ ತುಡಿತ, ತಾನೂ ಕೂಡ ಎಲ್ಲರಂತೆ ಭಾವನೆಗಳಿರುವ ಒಬ್ಬ ಸಾಮಾನ್ಯ ಮನುಷ್ಯ ಎಂಬುದರ ಕುರಿತಾಗಿದೆ. ‘ಕಿಲಿಮಂಜಾರೊ’ ಮೋಹನಸ್ವಾಮಿ ತನ್ನನ್ನು ತಾನು ಕಂಡುಕೊಳ್ಳುವುದಾಗಿದೆ. ‘ತಗಣಿ’ಯಲ್ಲಿ ಮೋಹನಸ್ವಾಮಿಯ ಗೆಳೆಯ ಶಂಕರೇಗೌಡ (ಒಬ್ಬ ಟ್ರ್ಯಾನ್ಸ್ಜೆಂಡರ್), ಆತನಿಗೆ ಏನಾಗುತ್ತದೆ ಎಂಬುದಾಗಿದೆ. ‘ದುರ್ಭಿಕ್ಷ ಕಾಲ’ ಈ ನಿರ್ದಯಿ ಕಾರ್ಪೊರೇಟ್ ಜಗತ್ತಿನಲ್ಲಿ ದೇವಿಕಾ ಹಾಗು ವಿನಾಯಕರ ಸರಳ ಸಾಧಾರಣ ಜೀವನದ ಏರಿಳಿತಗಳನ್ನು ಚಿತ್ರಿಸಿದೆ. ‘ಭಗವಂತ ಭಕ್ತ ಮತ್ತು ರಕ್ತ’ ಧಾರ್ಮಿಕತೆಯ ಧರ್ಮಾಚರಣೆಯ ಮೇಲೆ ನೋಟ ಬೀರುತ್ತದೆ . ‘ಪೂರ್ಣಾಹುತಿ’ಯಲ್ಲಿ ಟೆಕ್ನಾಲಜಿ ಸಾಮಾಜಿಕ ಜಾಲತಾಣದ ನ್ಯೂನತೆ ಹಾಗು ಮೂರ್ಖತನದ ನೈಜ ಚಿತ್ರಣ ರೂಪಿಸುತ್ತಾರೆ. ‘ದ್ರೌಪದಮ್ಮನ ಕತ್ತಿ’ ಪಂಚ ಪತಿಯರ ಪತ್ನಿಯಾದ ದ್ರೌಪದಿಯ ಮಾನಸಿಕ ಗದ್ದಲವನ್ನು ಸಾರುವ ಕಥೆಯಾಗಿದೆ. ‘ಇವತ್ತು ಬೇರೆ’ ಸಂಬಂಧಗಳ ಬಾಧ್ಯತೆ, ಅದರ ಮಿತಿ ಹಾಗು ಅನುಮತಿಗಳ ಕಥೆ ಹೇಳುತ್ತದೆ.
“ಮೋಹನಸ್ವಾಮಿ” ಹಲವು ಪಾತ್ರಗಳ ಜೀವನದ ಕುರಿತು ಹೊಸ ಹೊರನೋಟ ಸೂಸುವ ಒಂದು ವಿಶಿಷ್ಟ ವ್ಯಾಖ್ಯಾನವಾಗಿದೆ. ಇಲ್ಲಿನ ಪಾತ್ರಗಳು ನಮ್ಮ ದೈನಂದಿನ ಜೀವನದ ಒಂದು ಭಾಗ. ಲೇಖಕ ವಸುಧೇಂದ್ರರವರು ತಮ್ಮ ಕೃತಿ ಮೋಹನಸ್ವಾಮಿಯಲ್ಲಿನ ಸಣ್ಣಕಥೆಗಳ ಮೂಲಕ LGBTQ ಗೆ ಸೇರಿದ ಜನರು ಎಲ್ಲರಂತೆ ಸಾಮಾನ್ಯ ಮನುಷ್ಯರು ಅವರ ಭಾವನೆ, ಮಿಡಿತಗಳು ಅವರ ಲಿಂಗದ ಮೇಲೆ ಪ್ರಭಾವಿತ ಪ್ರೇರಣೆಗಳಷ್ಟೇ ಎಂದು ಹೇಳಲಿಚ್ಛಿಸಿದ್ದಾರೆ. ಮೋಹನಸ್ವಾಮಿ ಪಾತ್ರವು LGBTQ ಬಗ್ಗೆ ಹೇಳಿದರೆ ಮಿಕ್ಕ ಸಣ್ಣ ಕಥೆಗಳ ಪಾತ್ರಗಳು ಆಧುನಿಕತೆ ಎಂಬುದು ನಮ್ಮ ಜೀವನವನ್ನು ಸುಧಾರಿಸುವ ಬದಲು ಹೇಗೆ ಸರ್ವವ್ಯಾಪಿಯಾಗಿ ಹಾಳುಮಾಡುವತ್ತ ಸಾಗುತ್ತಿದೆ ಎಂದು ನಿದರ್ಶಿಸುತ್ತವೆ. ಕನ್ನಡ ಸಾಹಿತ್ಯದಲ್ಲಿ ಈ ರೀತಿಯ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದ ವಸುಧೇಂದ್ರರಿಗೆ ಅಭಿನಂದನೆಗಳು. ಕನ್ನಡ ಓದಲು ಬರುವ ಎಲ್ಲರು ಓದಲೇಬೇಕಾದ ಕೃತಿ ಇದು.
ವಿಮರ್ಶೆಯನ್ನು ಕನ್ನಡಕ್ಕೆ ಅನುವಧಿಸಿದವರು ಜಗದೀಶ್ ಟ್ ಸ್
Book review is translated into Kannada by Jagadeesh T S
Given below is the English translation of the book review given above.
Review by Shwetha H S
Genre: Nonfiction, Short Stories, LGBTQ
Imprint: Chanda Pustaka
ISBN: 9789384908249
Vasudhendra is a software engineer turned writer who professes his love for his mother tongue Kannada. Though he has written a novel, a major part of his works include short stories and essays. The reason why Mohanaswamy is special, especially in Kannada literature, is because it is a foremost work in modern times to be prominently focussed on a gay character. It is also said that this book was a coming-out-of-closet for the author himself.
Mohanaswamy consists of eleven short stories and a poem. Out of which six short stories are about Mohanaswamy, and remaining have different lead characters. Thutthatudiyali Motthamodalu is the introductory story about Mohanaswamy and tells you about the constant nagging guilt of being gay in this society. Kaggantu is about how Mohanaswamy loses his lover and partner to a girl. Kashiveeraru shows you how Mohanaswamy gets blackmailed by a childhood friend for money. Ollada Tambula tells you about how Mohanaswamy too is a normal human being and has needs and feelings like everybody. Kilimanjaro is about Mohanaswamy finding himself. Tagani shows you what happens to Mohanaswamy’s friend, Shankaregowda, a transgender. Durbhiksha Kaala is a glimpse into the seemingly simple lives of Devika and Vinayaka in this ruthless corporate world. Bhagawantha, Bhakta Matthu Rakhta is about facade of being religious. Poornahuti paints a candid picture of the downside of technology, social media and stupidity. Draupadammana Kathi is a take on Draupadi’s turmoil of having five husbands. Ivatthu Bere tells you about the limits and grants of obligations of relationships.
Mohanaswamy is a fresh outlook into the lives of various characters. People like these characters are part of our daily life. Through Mohanaswamy’s short stories, Vasudhendra shows readers that people belonging to LGBTQ are also humans, but only with exchanged emotions, feelings and genders. If Mohanaswamy, a character, tells you about LGBTQ, then the characters in the other short stories take you on a journey of showing how modern life has ruined everything for us instead of making things better. Kudos to Vasudhendra for such a bold initiative in Kannada literature. A must read for all people who can read Kannada.