Eshwara Bhat

Sarasammana Samadhi by Dr. Shivarama Karanth

ಸರಸಮ್ಮನ ಸಮಾಧಿ – ಡಾ|| ಶಿವರಾಮ ಕಾರಂತ (Sarasammana Samadhi by Dr. Shivarama Karanth)

English translation of this book review is given after the Kannada version.

ಶೈಲಿ: ವಿಡಂಬನೆ
ಲೇಖಕ: ಡಾ|| ಶಿವರಾಮ ಕಾರಂತ

ವಿಮರ್ಶಕರು ಶ್ವೇತಾ ಹೆಚ್ ಎಸ್

“ಸರಸಮ್ಮನಸಮಾಧಿ” – ಇದು ಒಂದು ವಿಡಂಬನಾತ್ಮಕ ಕೃತಿಯಾಗಿದ್ದು, ಮಹಿಳೆಯರನ್ನು ನಮ್ಮ ಸಮಾಜವು ಹೇಗೆ ಗುರುತಿಸುತ್ತದೆ ಮತ್ತು ನಡೆಸಿಕೊಳ್ಳುತ್ತದೆ ಎಂಬುದರ ಕುರಿತು ವಿಮರ್ಶೆ ಅಡಗಿದ್ದು, ಸ್ತ್ರೀಯರ ಭಾವನೆಗಳನ್ನು ಮತ್ತು ನಿಜಜೀವನದ ಬೇಕು-ಬೇಡಗಳ ಕುರಿತು ಬೆಳಕನ್ನು ಚೆಲ್ಲುತ್ತದೆ. ಶಿವರಾಮ ಕಾರಂತರ “ಸ್ತ್ರೀ-ಕೇಂದ್ರಿತ” ಅನೇಕ ಕಾದಂಬರಿಗಳಲ್ಲಿ “ಸರಸಮ್ಮನ ಸಮಾಧಿ”ಯು ಕೂಡ ಒಂದು. ಕಾದಂಬರಿಯ ಪರಿಸರವು ಮಂಗಳೂರು, ಮೂಡಂಬೈಲು, ಮಂಜೇಶ್ವರ ಮತ್ತು ಕಾಸರಗೋಡಿನ ಕೆಲವುಭಾಗಗಳಲ್ಲಿ ಚಿತ್ರಿತವಾಗಿದ್ದು, ಆ ಕಾಲ ಘಟ್ಟದಲ್ಲಿ ಈ ಪ್ರದೇಶಗಳೆಲ್ಲವೂ ಕರ್ನಾಟಕಕ್ಕೆ ಸೇರಿದ ಪ್ರದೇಶಗಳಾಗಿದ್ದವು. ಕಾರಂತರು ಕೂಡ ಕರಾವಳಿ ಭಾಗದವರೇ ಆಗಿದ್ದರಿಂದ, ಕೃತಿಯಲ್ಲಿ ಅಲ್ಲಿನ ಜೀವನಶೈಲಿಯು ಅತ್ಯಂತ ಸಹಜ ರೀತಿಯಲ್ಲಿ ಬಿಂಬಿತವಾಗಿವೆ.

ಚಂದ್ರಯ್ಯ ಎಂಬ ಸಿರಿವಂತ ಯುವಕ ಮೂಡಂಬೈಲಿನಲ್ಲಿ ವಾಸವಾಗಿದ್ದು, ಆತನಿಗೆ ಹೆಣ್ಣು ಕೊಡಲು ಅನೇಕ ಕುಟುಂಬಗಳು ಸಾಲಿನಲ್ಲಿ ನಿಂತಿದ್ದರು. ಚಂದ್ರಯ್ಯನಿಗೆ ಮಂಗಳೂರು ಮತ್ತು ಮಂಜೇಶ್ವರದಲ್ಲಿ ಅನೇಕ ಗೆಳೆಯರಿದ್ದರು. ಅವನು ವಿನೋದ ಪ್ರಿಯನಾಗಿದ್ದರೂ, ಅತಿಂದ್ರೀಯ, ಅಗೋಚರ ಶಕ್ತಿಗಳ ಕುರಿತು ಮತ್ತು ದೆವ್ವ-ಭೂತಗಳ ಬಗೆಗಳ ಕುರಿತಾದ ಕಥೆಗಳ ಬಗ್ಗೆ ವಿಪರೀತವಾದ ಕುತೂಹಲ ಹೊಂದಿದ್ದನು. ಯಾರಾದರೂ ಬಂದು, ತಮ್ಮ ಹಳ್ಳಿಯಲ್ಲಿ ದೆವ್ವ-ಭೂತದ ಕಾಟವಿದೆಯೆಂದು, ಪಿಶಾಚಿಗಳ ಚೇಷ್ಟೆಯಿದೆಯೆಂದು ಹೇಳಿದರೆ ಸಾಕು, ಅವರೊಂದಿಗೆ ಹೊರಟು ನಿಲ್ಲುತ್ತಿದ್ದನು. ಕೆಲವು ತಿಂಗಳುಗಳ ಅಂತರದಲ್ಲಿ, ತಮ್ಮ ಗಂಡಂದಿರು ಮತ್ತು ಕುಟುಂಬಗಳ ಬಗ್ಗೆ ಅಸಹನೆ ಹೊಂದಿದ್ದ ಹಲವು ಮಹಿಳೆಯರ ಕುರಿತು ಚಂದ್ರಯ್ಯ ಕೇಳಿಸಿಕೊಳ್ಳುತ್ತಾನೆ. ಈ ಮಹಿಳೆಯರು – ಮಹಾಸತಿ ಸರಸ್ವತಿ-ಯನ್ನು ಪೂಜಿಸುತ್ತಾರೆಂಬುದನ್ನು ಅರಿಯುತ್ತಾನೆ. ಮಹಾಸತಿ ಸರಸ್ವತಿಯು “ಸತಿ ಪದ್ದತಿ”ಯಂತೆ ಗಂಡನ ಜತೆ ಚಿತೆಯೇರಿ ಪ್ರಾಣತ್ಯಾಗ ಮಾಡಿದ್ದಾಳೆಂದು ಪ್ರತೀತಿಯಾಗಿದ್ದು, ಗಂಡಸರೂ ಸಹ ಅವಳ ಪೂಜೆ ಮಾಡುತ್ತಿದ್ದರು. ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಲು ನಿರ್ದಿಷ್ಟ ಸಮಯವಿದ್ದು, ಭಕ್ತರು ಗುರುವಾರ ಮಧ್ಯರಾತ್ರಿ ದೇವಸ್ಥಾನಕ್ಕೆ ಭೇಟಿಕೊಟ್ಟು, ಮಹಾ ಸತಿಯನ್ನು ಪ್ರಾರ್ಥಿಸಿ, ದೇವಾಲಯದ ಪಕ್ಕದಲ್ಲಿರುವ ಕೊಳದಲ್ಲಿ ತೆಂಗಿನಕಾಯಿಯನ್ನು ಬೇರೆ ಯಾರು ಕೂಡಗಮನಿಸದ ಹಾಗೆ ಹಾಕಬೇಕು. ಒಂದು ವೇಳೆ ಯಾರಾದರೂ ಅವರನ್ನು ಕಂಡರೆ, ಅಂತಹ ವರಕೋರಿಕೆಯು ಈಡೇರುವುದಿಲ್ಲ ಎಂಬುದು ಬಲವಾದ ನಂಬಿಕೆ.

ಚಂದ್ರಯ್ಯನು ರಾತ್ರಿ ನಿದ್ದೆಬಾರದಿದ್ದರೆ ಹಳ್ಳಿಯ ಸುತ್ತಮುತ್ತ ಸುತ್ತಾಡುತ್ತಿರುತ್ತಾನೆ. ಒಂದು ದಿನ, ಅವನ ಗೆಳೆಯನಾದ ಈಶ್ವರ ಭಟ್ಟ, ಅವನಿಗೆ ಮೂಡಂಬೈಲಿನಲ್ಲಿ ಒಂಟಿಯಾಗಿ ಅಲೆದಾಡುವ ಗಂಡಸರನ್ನು ಕಾಡುವ ಭೂತ – ಬೆಳ್ಳಿಯಕ್ಕನ ಕುರಿತು ಹೇಳುತ್ತಾನೆ. ಮತ್ತೊಬ್ಬ ಗೆಳೆಯ ಅವನ ಹಳ್ಳಿಯಲ್ಲೂ ಕೂಡ ಭೂತವಿದೆಯೆಂದು ಸುಳ್ಳು ಹೇಳಿ, ತನ್ನ ಮಗಳಾದ ಜಲಜಾಕ್ಷಿಯನ್ನು ಪರಿಚಯಿಸಲು ತನ್ನ ಮನೆಗೆ ಕರೆದೊಯ್ಯುತ್ತಾನೆ. ಚಂದ್ರಯ್ಯನಿಗೆ ರೂಪುವತಿಯೂ, ಸುಶಿಕ್ಷಿತೆಯೂ ಆದ ಹೆಣ್ಣಿನ ನಿರೀಕ್ಷೆಯಿದ್ದು, ಜಲಜಾಕ್ಷಿಯನ್ನು ನಿರ್ಲಕ್ಷಿಸುತ್ತಾನೆ. ಅವನಿಗೆ ಇನ್ನೋರ್ವ ಗೆಳೆಯನ ಮನೆಯಲ್ಲಿ ನೋಡಿದ ಭಾಗೀರಥಿ ನೆನಪಾಗುತ್ತಾಳೆ. ಭಾಗೀರಥಿಗೆ ಮದುವೆಯಾಗಿದ್ದು, ಆಕೆಯ ಗಂಡ ತನ್ನ ತಂದೆಗೆ ಹೆದರಿ ಓಡಿಹೋಗಿರುತ್ತಾನೆ. ಅವಳಿಗೂ ತನ್ನನ್ನು ಕಂಡರೆ ಒಲವಿದೆಯೆಂದು ಅರಿತ ಚಂದ್ರಯ್ಯ ಆ ಊರಿಗೆ ಹೋಗುತ್ತಾನೆ. ಅದೇ ದಿನ, ಅವಳ ಗಂಡ ಧೈರ್ಯವನ್ನೆಲ್ಲ ಒಗ್ಗೂಡಿಸಿ, ಎರಡು ವರ್ಷಗಳ ನಂತರ ಮರಳಿ ಬರುತ್ತಾನೆ. ಅವರ ನಡುವಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವರನ್ನು ಬಿಟ್ಟು, ಚಂದ್ರಯ್ಯ ಊರಿಗೆ ಮರಳುತ್ತಾನೆ. ಆ ದಿನರಾತ್ರಿ, ಅಷ್ಟು ದಿನಗಳಿಂದ ಹುಡುಕುತ್ತಿದ್ದ ದೆವ್ವವನ್ನು ಕಾಣುತ್ತಾನೆ. ಅತ್ಯಂತ ಸುಂದರ ಹೆಣ್ಣು ದೆವ್ವವಾದ ಬೆಳ್ಳಿಯಕ್ಕ, ಚಂದ್ರಯ್ಯನ ಸ್ನೇಹ ಬಯಸಿ, ಅವಳು ಕೇಳಿದ್ದನ್ನು ನೀಡಿದರೆ, ಅವನ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುವುದಾಗಿ ಭರವಸೆ ನೀಡುತ್ತಾಳೆ. ಚಂದ್ರಯ್ಯ ತಾನು ಭೇಟಿ ಮಾಡಿದ ಹೆಂಗಸರೆಲ್ಲರ ಕುರಿತು ಯೋಚಿಸಿ, ಒಂದು ನಿರ್ಧಾರಕ್ಕೆ ಬಂದು ತದನಂತರ ಅವಳನ್ನು ಪುನಃ ಭೇಟಿಯಾಗುವುದಾಗಿ ಹೇಳಿ, ಮನಃಶಾಂತಿಯನ್ನು ಅರಸಿ ಕಾಸರಗೋಡಿನ ಹಾದಿ ತುಳಿಯುತ್ತಾನೆ. ಅಲ್ಲಿ ಹೊಸದಾಗಿ ಮದುವೆಯಾದ ನಾಗವೇಣಿಯನ್ನು ಭೇಟಿಯಾಗುತ್ತಾನೆ. ವರ್ತಕನ ಮಗಳಾದ ಅವಳ ಗಂಡನಿಗೆ ಇದು ಮೂರನೆಯ ಮದುವೆಯಾಗಿದ್ದು, ಮಧುಚಂದ್ರಕ್ಕಾಗಿ ಅಲ್ಲಿಗೆ ಬಂದಿದ್ದರೂ ಆಕೆ ಅಸಮಾಧಾನ ಹೊಂದಿರುವುದನ್ನು ಚಂದ್ರಯ್ಯ ಅರಿಯುತ್ತಾನೆ. ಕಾಸರಗೋಡಿನಿಂದ ತನ್ನ ಊರಿಗೆ ಹಿಂದಿರುಗಿದರೂ ಮನೆಗೆ ಹೋಗದೆ ಮತ್ತೊಬ್ಬ ಗೆಳೆಯನ ಭೇಟಿ ಮಾಡಲು ಅವನ ಮನೆಗೆ ತೆರಳುತ್ತಾನೆ. ಅಲ್ಲಿ ಸುಂದರಿಯೂ, ವಿದ್ಯಾವಂತೆಯೂ ಆದ ಸುನಾಲಿನಿಯನ್ನು ಕಾಣುತ್ತಾನೆ. ಕೆಲ ಸಮಯದ ಹಿಂದೆ ಮಹಾಸತಿ ಸರಸ್ವತಿಯ ದೇವಸ್ಥಾನದ ಬಳಿ ಅವಳನ್ನು ದೆವ್ವವೆಂದು ನಂಬಿ, ಆಕಸ್ಮಿಕವಾಗಿ ಹಿಡಿದದ್ದನ್ನು ನೆನೆಯುತ್ತಾನೆ. ಅವಳನ್ನು ತನ್ನ ಗೆಳೆಯ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ತಿಳಿದು, ಆದ್ದರಿಂದ ಅವಳು ಸಹ ದುಃಖಿತಳಾಗಿರುವುದನ್ನು ಕಂಡು ಮರಗುತ್ತಾನೆ. ತನ್ನ ಮನೆಗೆ ಹಿಂದಿರುಗಿ, ತಾನು ಭೇಟಿಮಾಡಿದ ಎಲ್ಲ ಹೆಂಗಸರ ಬಗ್ಗೆ ಆಲೋಚಿಸಿ, ಒಂದು ನಿರ್ಧಾರಕ್ಕೆ ಬಂದು, ಬೆಳ್ಳಿಯಕ್ಕನ ಭೇಟಿ ಮಾಡಲು ಹೊರಡುತ್ತಾನೆ. ಆದರೆ ಬೆಳ್ಳಿಯಕ್ಕ ಯಾರ ಭೂತ? ಈ ಹೆಂಗಸರ ಮತ್ತು ಇತರ ಪಾತ್ರಗಳ ಮುಂದಿನ ಕಥೆಯೇನು? ಅದರ ಬಗ್ಗೆ ತಿಳಿಯಲು ನೀವು “ಸರಸಮ್ಮನ ಸಮಾಧಿ”ಯನ್ನು ಓದಬೇಕು.

ಸುಮಾರು ಒಂದು ಶತಮಾನದ ಹಿಂದೆ ಬರೆದಿದ್ದರೂ ಕೂಡ, ಓದುಗರು ಇಂದಿಗೂ ಅದರ ಪ್ರಸ್ತುತೆಯನ್ನು ಕಂಡು, ಪ್ರತಿಯೊಂದು ಪಾತ್ರದ ನೈಜತೆಯನ್ನು ಅರಿಯಬಹುದು. ಶಿಕ್ಷಿತರಾಗಿರಲಿ ಅಥವಾ ಅಶಿಕ್ಷಿತರಾಗಿರಲಿ, ಈ ಕಥೆಯಲ್ಲಿ ಬರುವ ಹಲವು ಸ್ತ್ರೀ-ಪಾತ್ರಗಳು ತಮ್ಮ ವೈವಾಹಿಕ ಜೀವನದ ಕುರಿತು ಭ್ರಮನಿರಸನಗೊಂಡು, ತಮ್ಮ ತಂದೆ ಅಥವಾ ಗಂಡ ತಮ್ಮನ್ನು ಅರ್ಥಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ. ಎಲ್ಲಾ ಕಾಲಘಟ್ಟಗಳಂತೆ, ಗಂಡಸರಾದವರು ಅವರ ಮಗಳ ಅಥವಾ ಹೆಂಡತಿಯ ಮನದ ಬಯಕೆಯನ್ನು ಅರಿಯಲು ವಿಫಲರಾಗುತ್ತಾರೆ. ಚಂದ್ರಯ್ಯ ಇವರೆಲ್ಲ ಬಗ್ಗೆ ಸಹಾನುಭೂತಿ ಹೊಂದಿದ್ದು, ಅವರಿಗೆ ಸಹಾಯ ಮಾಡಲು ಬಯಸುವವನಾಗಿರುವುದರಿಂದ, ಬಿನ್ನವಾಗಿಯೂ ವಿಶಿಷ್ಟವಾಗಿಯೂ ಕಾಣುತ್ತಾನೆ. ಸುನಾಲಿನಿಯು ವಿದ್ಯಾವಂತೆಯಾಗಿದ್ದರೂ, ಅಶಿಕ್ಷಿತನೊಡನೆ ಮದುವೆಯಾಗಿದ್ದು, ಅವನ ಅಜ್ಞಾನದಿಂದ ತೊಂದರೆಗೊಳಗಾಗಿರುತ್ತಾಳೆ. ಹೆಂಗಸರನ್ನು ಪಾದರಕ್ಷೆಗಳಂತೆ ಕಾಣಬೇಕೆಂಬ ಮಾವ ಮತ್ತು ಇಂಥ ತಂದೆಯನ್ನು ವಿರೋಧಿಸದ ಗಂಡನ ಬಗ್ಗೆ ರೋಸಿ ಹೋಗಿ ಗಂಡನ ಮನೆ ಬಿಟ್ಟಭಾಗೀರಥಿ.  ತನ್ನ ಹೆಣ್ಣು ಮಕ್ಕಳ ಬಗ್ಗೆ ಅತೀವಕಾಳಜಿಹೊಂದಿದ್ದು, ಗಂಡನ ಪೊಳ್ಳು ಸ್ವಾಭಿಮಾನ ಮತ್ತು ಜಿಪುಣತನವನ್ನು ಕಂಡಿದ್ದರೂ ಜಾನಕಿ, ತನ್ನ ಹಿರಿಯ ಮಗಳಾದ ನಾಗವೇಣಿಯನ್ನು ಉದ್ಯೋಗವಿಲ್ಲದ, ಎರಡು ಹೆಂಡತಿಯರನ್ನು ಕಳೆದುಕೊಂಡ ವಿಧುರನಿಗೆ ಮದುವೆ ಮಾಡಿಕೊಡುತ್ತಾಳೆ. ಅಷ್ಟು ಸುಂದರಿಯೂ ಅಲ್ಲದ, ವಿದ್ಯಾವಂತೆಯೂ ಅಲ್ಲದ ಜಲಜಾಕ್ಷಿಯನ್ನು ಯಾವ ವರನು ಕೂಡ ಇಷ್ಟ ಪಡದ ಕಾರಣ ಅವಳಿಗೆ ಇನ್ನು ಮದುವೆಯ ಭಾಗ್ಯವಿಲ್ಲ. ಇವರೆಲ್ಲರ ಕುರಿತಾಗಿ ಚಂದ್ರಯ್ಯ ಮರುಗುತ್ತಾನೆ. ಇವೆಲ್ಲದರ ನಡುವೆ ರೂಪವತಿಯಾಗಿದ್ದರು, ಭೂತವಾದ ಬೆಳ್ಳಿಯಕ್ಕನನ್ನು ಸಹ ಅವನು ನಿಭಾಯಿಸ ಬೇಕಾಗಿರುವುದು ಇನ್ನೊಂದು ಸವಾಲು. ಜೀವಂತವಾಗಿರಲಿ ಅಥವಾ ಇಲ್ಲದಿರಲಿ, ಪ್ರತಿಯೊಂದು ಪಾತ್ರವೂ ಕೂಡ ತನ್ನದೇ ಆದ ವೈವಿಧ್ಯತೆಯನ್ನು ಮತ್ತು ಮಹತ್ವವನ್ನು ಸಾರುತ್ತವೆ.

“ಸರಸಮ್ಮನ ಸಮಾಧಿ”ಯು ಒಂದು ಉತ್ಕೃಷ್ಟವಾದ ಕೃತಿಯಾಗಿದ್ದು, ಜನರು, ವಿಶೇಷವಾಗಿ ಪುರುಷರು ತಮ್ಮ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದ, ಮಾಡುವ ಆಯ್ಕೆಗಳಿಂದ, ತಮ್ಮ ಜೀವನದ ಭಾಗವಾದ ಹೆಂಗಸರ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತಿದೆ ಎಂದು ಅವಲೋಕನ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಕೇವಲ ಭೋಗದ ವಸ್ತುಗಳಾದ ಆಭರಣಗಳು, ಸಿರಿವಂತಿಕೆಗಳಿಂದ ಹೆಂಗಸರನ್ನು ಸಂತೋಷಪಡಿಸಲು ಆಗುವುದಿಲ್ಲ, ಆದರೆ ಪ್ರೀತಿ-ಸಹಾನುಭೂತಿಗಳಿಂದ ಸಾಧ್ಯ ಎನ್ನುವುದು ಇದರ ಕೇಂದ್ರ ವಸ್ತು. ಬಿಗಿಯಾದ ನಿರೂಪಣೆ ಮತ್ತು ಪ್ರಬುದ್ಧ ಪಾತ್ರ ಪೋಷಣೆಯಿಂದ ಓದಿಸುತ್ತಾ ಸಾಗಿಸುವ ಈ ಪುಸ್ತಕವು ಎಲ್ಲಿಯೂ ಕೂಡ ಸಡಿಲಗೊಳ್ಳುವುದಿಲ್ಲ. ಪುಸ್ತಕದ ಹೆಸರನ್ನು ಕಂಡು, ಇದೊಂದು ರಕ್ತಸಿಕ್ತ ಕಥಾನಕವಿರಬಹುದೆಂದು ಭಾವಿಸಿದ್ದ ನನಗೆ, ಸಮಾಜದ ಬಗ್ಗೆ ಮತ್ತು ಅದರ ಕಟ್ಟುಪಾಡುಗಳ ಬಗ್ಗೆ, ಮದುವೆಯ ಕುರಿತಾದ ನಂಬಿಕೆಗಳ ಬಗ್ಗೆ ವಿಮರ್ಶೆಗೆ ಒಳಗಾಗುವಂತೆ ಮಾಡಿದ, ಸ್ವಲ್ಪ ಮಟ್ಟಿಗೆ ನಕ್ಕುನಲಿಯುವಂತೆ ಮಾಡಿದ ಒಂದು ಸುಂದರ ಕೃತಿ. ಪ್ರತಿಯೊಬ್ಬರೂ ಕೂಡ ಇದನ್ನು ಓದಲೇ ಬೇಕೆಂದು ನಾನು ಶಿಫಾರಸ್ಸು ಮಾಡುತ್ತೇನೆ.

Given below is the English translation of the book review given above.

Genre: Satire
Author: Dr. Shivarama Karanth

Review by Shwetha H S

Sarasammana Samadhi can be called a satire that mocks at how women are portrayed and made to behave by the society, but also about how they actually are in real life and what they want. The author Dr. Shivarama Karanth has written woman-centric novels, and just like his other works, Sarasammana Samadhi is also about women. The story is set in the areas of Mangalore, Mudambailu, Manjeshwara and, to certain extent, Kasaragodu. Back when this novel was written, all these places were in Karnataka, and near to where the author lived. The life in the coastal region can be found in a few instances in the story.

Chandraiah is a single youth and is wealthy enough for other families to want him to marry their daughters. He lives in Mudambailu and has friends in Mangalore and Manjeshwara. He is of jovial nature and is especially interested in paranormal and ghost stories. If one wants to catch his attention, he/she has to tell him that they have ghosts in their village. It will be more than enough to take him to their village. In a span of a few months, Chandraiah comes across a few women who are distraught with their husbands and families. These women go to pray to Mahasati Saraswathi, a lady who was said to have sacrificed herself in the pyre of her husband as Sati practice. Even men pray to her. There is a special time to pray for the goodness of the family life. The devotee has to go to her temple at the midnight of any Thursday, pray to Mahasati and throw a coconut into the pond next to the temple. All this has to be done without anybody noticing it. If anybody notices a man or a woman doing so, their wishes won’t come true. Chandraiah roams around the village and surroundings when he isn’t sleepy. One day, his friend Eshwara Bhat tells him about Belliyakka, a ghost that haunts men who roam around in Mudambailu alone at night. His other friend too tells that there is a ghost in his village too, but it isn’t true. He just wants to take Chandraiah to his home so that he can show his daughter, Jalajakshi, to this unmarried young man. Chandraiah is not only looking for a charming girl, but also wants to marry an educated girl. Jalajakshi doesn’t meet either of his expectations and he doesn’t show any interest in her. He suddenly remembers a girl, Bhagirathi, he had seen at his friend’s place. Bhagirathi is married, but her coward husband has left her scared of his father. Chandraiah knows she also likes him. So he goes to his friend’s village and talks to her. On the same day, her husband finally musters courage to come and gather her after staying apart for two years. Chandraiah leaves the couple to sort their issues and goes back to his home. On his wanderings one night, he meets the ghost in whose search he had roamed everywhere. Belliyakka, the ghost of a beautiful woman, asks his friendship and if he is willing to give her what she asks for in return to answers to his questions. Chandraiah tells her that he will come back to her once he decides of the women he has met. He goes off to Kasaragodu in search of peace of mind, but there he sees the newly married Nagaveni, who has come there with her third-time married husband on honeymoon, but it is evident that she is not happy with him. Nagaveni is the daughter of a merchant of his village. From Kasaragodu, Chandraiah goes back to his village and instead of going home he goes to his friend’s shop to chat with him. He doesn’t find his friend there, so Chandraiah goes to his friend’s home. There he finds Sunalini, a beautiful and educated girl whom he had accidentally held near Mahasati Saraswathi’s temple at the midnight thinking she is the ghost. He understands that she too is unhappy because his friend doesn’t love her, and pities her. After listening to her plight, he goes back home. He contemplates about all the women he has met, and goes to meet Belliyakka to tell his decision. But whose ghost is this Belliyakka? What happens to all these girls and women in the story? Read Sarasammana Samadhi to know more.

All the characters in the story are relatable. Though this was written almost a century ago, the reader can still relate to it. Women of this story, both educated and uneducated, are fed up of their married lives and want their husbands and fathers to understand them. Just like men of every era, men in this story too are unaware of what their wives and daughters want. What makes Chandraiah special is he is compassionate enough to understand these women’s plight and help them. Sunalini is an educated girl married to an uneducated man, and is suffering due to his ignorance. Bhagirathi has left her husband’s home because her father-in-law thinks women should be treated like footwear and her husband is afraid of his father to support her. Janaki is a mother worried about her daughters because her husband doesn’t care about anything except money and his false prestige. Yet, she happily marries her first daughter Nagaveni to an unemployed youth whose previous two wives are dead. Jalajakshi is an unmarried girl with not beauty and education, hence undesirable to men. Chandraiah pities each of them. But he has to deal with Belliyakka, the beautiful ghost too. Each character, whether dead or alive, has a life of its own and is well depicted in the story.

Sarasammana Samadhi is a well-written book that makes people, especially men, think of the choices they are making that are affecting the women in their lives and leading to lose their love. The essence of the story is that women cannot be kept happy with jewellery, but they also need their husband’s love. Not even once will you get bored reading this novel that has interconnected and developed characters. Sarasammana Samadhi means Sarasamma’s Grave in Kannada. From the title, I thought it must be a gory story, but it turned out to be a thought provoking satire that will also make you laugh at the society and its idea of marriage. I will definitely recommend this book to everyone.

ವಿಮರ್ಶೆಯನ್ನು ಕನ್ನಡಕ್ಕೆ ಅನುವಧಿಸಿದವರು ಸತೀಶ್ ಏ ಜೀ
Book review is translated into Kannada by Satish A G