General B.M. Kaul

ಹಿಮಾಲಯನ್ ಬ್ಲಂಡರ್, ಕನ್ನಡಕ್ಕೆ ಅನುವಾದಿಸಿದವರು ರವಿ ಬೆಳಗೆರೆ (Himalayan Blunder by Brigadier John Dalvi)

For English translation of the review of this book, please scroll down.

ವಿಮರ್ಶೆ ಬರೆದವರು ಸುಚೆತಾ ಕೆ ನಾರಾಯಣ್

ಹಿಮಾಲಯನ್ ಬ್ಲಂಡರ್, ಭಾರತದ ಗಡಿಯುದ್ದಕ್ಕೂ ಹರಿದ ನೆತ್ತರಗಾಥೆ.ಭಾರತದ ನಾಯಕರ ಅಸಮರ್ಥತೆಗೆ  ಹಿಡಿದ ಕನ್ನಡಿ. ಇತಿಹಾಸದ ಪುಟಗಳಲ್ಲೆಲ್ಲೋ ಕಳೆದು ಹೋದ  ಧೀರ ಯೋಧನ ಯುದ್ಧ ವರದಿ. ಪ್ರತಿಯೊಬ್ಬ ಭಾರತೀಯನೂ ತಿಳಿದಿರಲೇ ಬೇಕಾದ ನಗ್ನ ಸತ್ಯ.

೧೯೬೨ರ ಥಗ್ಲಾ ಯುದ್ದದ ಪೂರ್ತಿ ವರದಿಯ ಜೊತೆಗೆ ಸೋಲಿಗೆ ಕಾರಣಗಳ ವಿವರಣೆಗಳನ್ನು ಒಳಗೊಂಡಿದೆ ಈ ಪುಸ್ತಕ. ಮೂಲ ಲೇಖಕರು ವೀರ ಯೋಧರಾದ ಬ್ರಿಗೇಡಿಯರ್ ಜಾನ್ ಪಿ ದಳವಿ. ಕನ್ನಡೀಕರಿಸಿ ಕನ್ನಡಿಗರ ಮನ,ಮನೆ ತಲುಪುವಂತೆ ಮಾಡಿದ್ದು ರವಿ ಬೆಳಗೆರೆ. “ಪುಸ್ತಕ ಓದಿ ಮುಗಿಸಿದ ಪ್ರತಿಯೊಬ್ಬನನ್ನು ಭಾರತೀಯ ಸೈನಿಕ  ಒಂದೇ ಒಂದು ಪ್ರಶ್ನೆ ಕೇಳುತ್ತಾನೆ ನೀನು ನೆಹರೂವನ್ನು ಕ್ಷಮಿಸಿಬಿಟ್ಟೆಯಾ?” ಇದು ಮುನ್ನುಡಿಯಲ್ಲಿ ಬರುವ ಒಂದು ವಾಕ್ಯ. “ನಿಮಗೆ ನೆಹರು, ಥಾಪರ್ ಮುಂತಾದವರ ಬಗ್ಗೆ ಗೌರವವಿದ್ದಲ್ಲಿ ಈ ಪುಸ್ತಕವನ್ನು ಮುಚ್ಚಿಟ್ಟು ಬಿಡಿ. ಯಾವುದಾದರು ಮಗುವಿಗೆ ಕೊಡಿ ಅದಾದರೂ ಈ ದೇಶದ ಇತಿಹಾಸ ತಿಳಿದುಕೊಳ್ಳಲಿ” ಎಂಬ ಲೇಖಕರ ನುಡಿ ಭಾರತದ ನಿಜವಾದ ಇತಿಹಾಸದ ಮೇಲೆ ಆವರಿಸಿರುವ ಸುಳ್ಳಿನ  ಪರದೆಯನ್ನು ಕಳಚುವ ಪ್ರಯತ್ನ.

೧೯೬೨ರ ಯುದ್ದದ ಹೀನಾಯ ಸೋಲು ಭರಿಸಲಾಗದ ಅವಮಾನ. ಇದರ ಹೊಣೆ ಪ್ರತಿಯೊಬ್ಬ ಭಾರತೀಯನ ಮೇಲಿತ್ತು. ಅತ್ತ ಭಾರತೀಯ ಸೈನಿಕ ಕೊರೆಯುವ ಚಳಿಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬೆಚ್ಚಗಿನ ಬಟ್ಟೆಯೂ ಇಲ್ಲದೆ ಕಣ್ಣಿಗೆ ಕನ್ನಡಕವೂ ಇಲ್ಲದೆ ರಕ್ತವಾಂತಿ ಮಾಡಿಕೊಳ್ಳುತ್ತಾ ಗಡಿ ಕಾಯಲು ನಿಂತಿದ್ದ. ಇತ್ತ ದೆಹಲಿಯಲ್ಲಿ ಬೆಚ್ಚಗೆ ಕುಳಿತು, ಹಿಮಾಲಯದ ನಕ್ಷೆ ಮುಂದಿಟ್ಟುಕೊಂಡು ರಣತಂತ್ರ ರೂಪಿಸಿದ್ದ ಕೌಲ್ ಎಂಬ ಮೇಧಾವಿ! ವಿಪರ್ಯಾಸವೆಂದರೆ ಆ ನಕ್ಷೆಯಲ್ಲಿ ಗುರುತಿಸಿದ್ದ ಎಷ್ಟೋ ಪ್ರದೇಶಗಳು ಹಾಗಿರಲೇ ಇಲ್ಲವಂತೆ. ಇಂತಹ ಅಮಾನವೀಯತೆ, ಅಸಡ್ಡೆ ಯಾರದೋ ನಿರ್ಲಕ್ಷತೆಗೆ ಬಲಿಯಾಗಿದ್ದು ನಮ್ಮ ನಿಸ್ಸಹಾಯಕ ಸೈನಿಕ. ಬಹಳಷ್ಟು  ಜನರಿಗೆ ಹಿಮಾಲಯದ ಬೆಟ್ಟಗಳಲ್ಲಿ ಕಾಲಿಟ್ಟೂ ಗೊತ್ತಿರಲಿಲ್ಲವಂತೆ. ಇಷ್ಟು ಹೀನಾಯವಾಗಿ ನಡೆಸಿಕೊಂಡಿದ್ದರೂ ಯಾರನ್ನೂ ದೂರದೇ, ಗಡಿಯಲ್ಲಿ ಮಡಿದ ಸೈನಿಕನಿಗೊಂದು ಶ್ರದ್ಧಾಂಜಲಿ ಎನ್ನುವಂತಿದೆ ಈ ಹಿಮಾಲಯನ್ ಬ್ಲಂಡರ್.

ಭಾರತದ ಸೋಲಿಗೆ ಸೈನಿಕರ ನಿರ್ಬಲತೆ ಕಾರಣವಾಗಿರಲಿಲ್ಲ. ಅಸಮರ್ಥತೆ ಕಾರಣವಾಗಿರಲಿಲ್ಲ. ಅಸಹಾಯಕತೆ ಕಾರಣವಾಗಿತ್ತು. ಸುಮಾರು ಹತ್ತು ವರ್ಷಗಳಿಂದಲೂ ಚೀನಾ ನಡೆಸಿದ ಯುದ್ದ ಸನ್ನಾಹವನ್ನು ಗಣನೆಗೆ ತೆಗೆದುಕೊಳ್ಳದೆ, ಸರಿಯಾದ ರಸ್ತೆಯನ್ನು ನಿರ್ಮಿಸದೆ, ಅತೀ ಅಗತ್ಯವೆನಿಸುವ ಕನಿಷ್ಟ ಸಾಮಗ್ರಿಗಳನ್ನೂ ಒದಗಿಸದೆ ಸೋತ ತಪ್ಪನ್ನು, ಹೊಣೆಯನ್ನು ಸೈನಿಕನ ಹೆಗಲಿಗೇರಿಸಿದ ರಾಷ್ಟ್ರ ನಾಯಕರನ್ನು ಏನೆನ್ನೋಣ? ಹೀಗೆ ಇತಿಹಾಸದ ಗರ್ಭದಲ್ಲಿ ಅಡಗಿರುವ ಸತ್ಯವನ್ನು ಬಿಚ್ಚಿಡುವ ಪುಸ್ತಕವನ್ನು ಓದಿ ಒಂದೇ ಒಂದು ಹನಿ ಕಣ್ಣೀರು ನಮ್ಕಾ ಚು ನದಿಯ ದಡದಲ್ಲಿ ದೇಶಕ್ಕಾಗಿ ಮಡಿದ ಜೀವಗಳಿಗೋಸ್ಕರ  ಕೆಳಕ್ಕುರುಳಿದರೆ ಸಾರ್ಥಕ ಎಂಬುದು ಮುನ್ನುಡಿಯ ಇನ್ನೊಂದು ಮಾತು. ನಾನಂತೂ  ಹನಿಗಣ್ಣಾಗಿದ್ದೇನೆ. ಮತ್ತೀಗ ನಿಮ್ಮ ಸರದಿ. ಓದಿ ನೋಡಿ.

English translation of the review given above in Kannada:

Review by Suchetha K Narayan

Himalayan Blunder is the story of blood which flowed along the border of India. It reflects the inability of the leaders of Indian politics. This is an account given by a valiant soldier which was lost amidst the pages of our history. It is a naked truth that every Indian should know!

This book reports full details as well as reason for India’s defeat in Battle of Thagla that happened in 1962. The original author of this book is Brigadier John P Dalvi who had served in the Indian Army. Kannada translation is done by Ravi Belagere. “Every reader after finishing this book is asked a question by Indian Solider if he/she could forgive Nehru?” This is one of the lines given in the preface. “You should close this book, if you have immense respect for Nehru, Thapar and other leaders. Kindly hand it over to a child; at least it will learn about the true history of this land.” These words of the author try to unveil the true history of India which is buried by many lies.

The colossal defeat in 1962 war brought a huge shame. The consequence of this war was on every citizen of India. While Indian troops were trying hard to protect themselves in the chilling conditions having neither proper warm-clothes nor proper eye gears, and even though they were vomiting blood, they stood there at the border to protect us. Here in Delhi, sitting in a warm cozy room with map of Himalayas in front of him was Kaul, who was the main war strategist. Irony was many of those places shown on map did not match to any places that were actually present. Many of the soldiers had not even stepped into the Himalayan Mountains. This type of inhumanity, foolishness, and carelessness done by those leaders, sacrificed hundreds of helpless, unprepared and ill-equipped soldiers. And still those soldiers, without complaining, gave their lives at the border, so this book is like a tribute to them.

India’s defeat was not due to weakness of Indian soldiers. It was not even due to their inability. Helplessness was the reason. Without keeping in mind about the wars and relationship with China in the past ten years, without building proper roads and without providing minimum basic necessities to them, soldiers were blamed by the national leaders for losing the battle. What shall those leaders be called as? Truth that is lost in our history is put forward in this book. If this book brings even a single tear in the eyes of the readers for the Indian soldiers who died along the banks of Namka Chu river, then the book accomplishes to do what is mentioned in its preface. I have read it and now it’s your turn.