Jogi

ನದಿಯ ನೆನಪಿನ ಹಂಗು, ಲೇಖಕ ಜೋಗಿ (meaning: In Debt of the Memories of a River, by Jogi)

For English translation of the review of this book, please scroll down.

ವಿಮರ್ಶೆ ಬರೆದವರು ಯೋಗೇಶ್ ಕೆ ಎಸ್

ಯಾವುದೋ ಒಂದು ಪರಿಚಯವಿಲ್ಲದ ಲೇಖಕರ ಪುಸ್ತಕವನ್ನು ಕೈಗೆತ್ತಿಕೊಳ್ಳುವಾಗ, ನಮ್ಮಲ್ಲನೇಕ ಹವ್ಯಾಸಿ ಓದುಗರಿಗೆ ಒಳಗೊಳಗೇ ಒಂದು ಪುಟ್ಟ ಅಳುಕಿರುತ್ತದೆ. ‘ಈ ಪುಸ್ತಕ ಚೆನ್ನಾಗಿದ್ಯಾ?’, ‘ಓದಿಸಿಕೊಂಡು ಹೋಗುತ್ತಾ?’, ‘ಬರವಣಿಗೆಯ ಶೈಲಿ ನನಗೆ ಹಿಡಿಸುತ್ತಾ?’ ಇತ್ಯಾದಿ ಪ್ರಶ್ನೆಗಳು ಒಮ್ಮೆಲೇ ಒತ್ತರಿಸಿಕೊಂಡು ಬಂದು ನಮ್ಮನ್ನು ಸಂದಿಗ್ಧತೆಯಲ್ಲಿ ಸಿಲುಕಿಸಿಬಿಡುತ್ತವೆ. ಸಾಮಾನ್ಯವಾಗಿ ಈ ಜಾತಿಗೆ ಸೇರಿದ ಓದುಗರು ಯಾರೋ ಆಗಲೇ ಓದಿ ಚೆನ್ನಾಗಿದೆ ಎಂದ ನಂತರವಷ್ಟೇ ಅದೇ ಪುಸ್ತಕವನ್ನು ಹುಡುಕಿ ಓದುವುದು ರೂಢಿ.

ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ‘ನದಿಯ ನೆನಪಿನ ಹಂಗು’ ಪುಸ್ತಕ ಖರೀದಿಸುವ ಅವಕಾಶ ಬಂದಾಗ ನಾನು ಸಿಲುಕಿದ್ದೂ ಇಂತಹ ಇರುಕಿನಲ್ಲೇ, ಏಕೋ “ನದಿಯ ನೆನಪಿನ ಹಂಗು” ಎಂಬ ಹೆಸರು ಹಾಗೂ ಮುಖಪುಟದ ಮೇಲಿನ “ಎಲ್ಲ ನದಿಗಳಿಗೂ ಕಡಲು ಇರುವುದಿಲ್ಲ” ಎಂಬ ಉಲ್ಲೇಖ ಬಹಳ ಹಿಡಿಸಿದ್ದರಿಂದ ಆ ಕಾದಂಬರಿಯನ್ನು ಓದುವ ನಿರ್ಧಾರ ತೆಗೆದುಕೊಂಡೆ. ಅದೃಷ್ಟವಶಾತ್ ನನ್ನ ಮನಸ್ಸು ಬದಲಿಸಲು ಯಾವುದೇ ಇತರ ಪ್ರಲೋಭನೆ ಇಲ್ಲದ ಕಾರಣ ಆ ಪುಸ್ತಕವನ್ನು ಖರಿದಿಸಿದ್ದೂ ಆಯಿತು. ಬಹಳ ಕಾಲದ ನಂತರ ಒಂದು ಉತ್ತಮ ಪುಸ್ತಕ ಓದುವ ಭಾಗ್ಯ ನನ್ನದಾಯಿತು. ಹೊಸ ಲೇಖಕರೊಬ್ಬರ ಪರಿಚಯ ನನ್ನ ಪಟ್ಟಿಗೆ ಸೇರಿತು.

ಸರಿ, ಅದೊಂದು ದಿನ ಸುಮಾರು ಮಧ್ಯ ರಾತ್ರಿಯ ಸಮಯ ಬಿಡುವಾದಾಗ ಈ ಪುಸ್ತಕ ಹೇಗಿದೆ ನೋಡೋಣವೆಂದು ಮೊದಲು ಪುಟ ಓದಲಾರಂಭಿಸಿದೆ. ಮೊದಲ ಕೆಲವು ಸಾಲುಗಳಲ್ಲಿಯೇ ಲೇಖಕರು ಕೊಡುವ ಹೋಲಿಕೆ ಬಹಳ ಮುದ ತಂದಿತು. ಅವರು ಹೇಳುತ್ತಾರೆ – “ಕಾದಂಬರಿ ನದಿಯ ಹಾಗೆ, ಸಣ್ಣ ಸೆಲೆಯಾಗಿ ಹುಟ್ಟುವ ನದಿ ಕ್ರಮೇಣ ಇತರ ಉಪನದಿಗಳೊಂದಿಗೆ ಸೇರಿಕೊಳ್ಳುತ್ತ ಸಾಗುತ್ತದೆ, ಕಥೆ ಶಿಕಾರಿಯ ಹಾಗೆ ಮತ್ತು ಕವಿತೆ ಕಾಲದ ಹೊಳೆಗೆ ಗಾಳ ಹಾಕುತ್ತ ಕೂರುವುದು” ಅಂತ. ನೀವು ಎಂದಾದರು ಬರೆಯಲು ಪ್ರಯತ್ನಿಸಿದ್ದರೆ ನೀವೂ ಈ ಹೋಲಿಕೆಗಳನ್ನು ಖಂಡಿತ ಒಪ್ಪುತ್ತೀರೆಮ್ಬುದು ನನ್ನ ಅಭಿಪ್ರಾಯ. ಸರಿ ಉಪೋದ್ಘಾತವಾಯಿತು ಎಂದು ಮುಂದಿನ ಪುಟ ತೆರೆದರೆ ಅಲ್ಲೊಂದು ಶೀರ್ಷಿಕೆ “ಸಾವಿನಿಂದ ಹುಟ್ಟಿದ ಕತೆ.” ‘ಅರೆ!! ನಾನು ತೆಗೆದುಕೊಂಡಿದ್ದು ಕಾದಮ್ಬರಿಯಲ್ಲವೇ, ಇದೇಕೆ ಶೀರ್ಷಿಕೆ?’ ಎಂದು ಇನ್ನೂ ಕೆಲವು ಪುಟಗಳನ್ನು ತಿರುವಿದಾಗ ಸುಮಾರು ಮೂರು ಪುಟಗಳಿಗೊಮ್ಮೆ ಇಂತಹ ಸುಂದರ ಶೀರ್ಷಿಕೆಗಳು ಕಾಣಿಸಿದವು. ಆಗ ನನಗೆ ಲೇಖಕರ ಮೇಲೆ ಹೇಳಿದ – ‘ಕಾದಂಬರಿ ನದಿಯ ಹಾಗೆ…’ ಎಂಬ ಮಾತು ಬಹಳವೇ ಅರ್ಥಪೂರ್ಣವೆನಿಸಿತು. ಇಷ್ಟಾದರೂ ನನ್ನ ಅಳುಕು ಪೂರ್ತಿಯಾಗಿ ಹೋಗಿರಲಿಲ್ಲ ಮೊದ ಮೊದಲಿಗೆ ಎಲ್ಲ ಕಾದಂಬರಿಗಳೂ ಚೆನ್ನಾಗಿಯೇ ಆರಂಭವಾಗುತ್ತವೆ ಎಂದುಕೊಳ್ಳುತ್ತ ಮುಂದೆ ಓದಿದಂತೆ ಕಥೆಯ ಓಘ ನನ್ನನ್ನು ಸಂಪೂರ್ಣ ಮಂತ್ರಮುಗ್ಧನನ್ನಾಗಿಸಿತು. ಬಹಳ ಸಮಯದ ನಂತರ ಕೇವಲ ಎರಡೇ ಕಂತಿನಲ್ಲಿ ಪೂರ್ತಿ ಪುಸ್ತಕವನ್ನು ಓದಿ ಮುಗಿಸಿದ್ದಾಯಿತು.

ಈ ಕಾದಂಬರಿಯಲ್ಲಿ ಕಥೆಗಿಂತ ಬರವಣಿಗೆಯ ಶೈಲಿ ಎದ್ದು ತೋರುತ್ತದೆ. ಹಾಗೆಂದ ಮಾತ್ರಕ್ಕೆ ಕಥೆ ಚೆನ್ನಾಗಿಲ್ಲವೆನ್ದಲ್ಲ. ಇತರ ಕಾದಂಬರಿಗಳಂತೆ ಒಂದೇ ಕಥಾಹಂದರದ ಸುತ್ತ ಅಥವಾ ನಿರ್ದಿಷ್ಟ ವ್ಯಕ್ತಿಗಳ ಸುತ್ತ ಸುತ್ತದೆ ವಿಭಿನ್ನವಾಗಿ, ಕೇವಲ ಕಥೆ ನಡೆಯುವ ಪ್ರದೇಶವನ್ನಷ್ಟೇ ಬಳಸಿಕೊಂಡು ಹೊಸ ಪಾತ್ರಗಳು ಹಾಗು ಸನ್ನಿವೇಶಗಳನ್ನು ಪರಿಚಯಿಸುತ್ತಾ ಹೋಗುತ್ತಾರೆ ಲೇಖಕರು. ಯಾವುದೇ ಸನ್ನಿವೇಶವನ್ನು ಅಗತ್ಯವಿದ್ದಷ್ಟೇ ವಿವರಿಸಿ, ಅದನ್ನು ಹಿನ್ನೆಲೆಗೆ ನೂಕಿ ಇನ್ನೊಂದು ಹೊಸ ಸನ್ನಿವೇಶವನ್ನು ವಿವರಿಸುತ್ತ, ಮುಂದೆಲ್ಲೋ ಮತ್ತೆ ಹಿಂದಣ ಸನ್ನಿವೇಶಗಳನ್ನು ಜೋಡಿಸಿಕೊಳ್ಳುತ್ತ ಅಕ್ಷರಶಃ ನದಿಯಂತೆ ಸಾಗುವುದು ಕಾದಂಬರಿಯ ವೈಶಿಶ್ಥ್ಯ.

ಸಾಮಾನ್ಯವಾಗಿ ಯಾವುದೋ ಒಂದು ಸನ್ನಿವೇಶವನ್ನು ವಿವರಿಸುತ್ತ ಹೊಸ ಪಾತ್ರ ಪ್ರವೇಶವಾದರೆ, ಅದರ ಪರಿಚಯವನ್ನು ಆ ಪಾತ್ರದ ಕುರಿತಾದ ಸಣ್ಣ ಉಪಕಥೆಯೊಂದಿಗೆ ವಿವರಿಸುವ ತಂತ್ರ ಪೂರ್ಣಚಂದ್ರ ತೇಜಸ್ವಿ ಹಾಗೂ ಕುವೆಂಪುರವರ ಪುಸ್ತಕಗಳಲ್ಲಿ ಕಾಣಬಹುದು. ಜೋಗಿ ಕೂಡ ಅದರಿಂದ ಪ್ರಭಾವಿತರಾಗಿ ತಮ್ಮ ಪಾತ್ರಗಳನ್ನೂ ಇನ್ನೂ ಸ್ಫುಟವಾಗಿ, ಸಂಕ್ಷಿಪ್ತವಾಗಿ ಆದರೆ ನಿರ್ದಿಷ್ಟತೆಯೊಂದಿಗೆ ಪರಿಚಯಿಸುತ್ತಾರೆ. ಹೀಗಾಗಿ ಈ ಕಾದಂಬರಿಯಲ್ಲಿನ ನಿರಂಜನ, ಸೋಮಯಾಜಿ, ಸುಗಂಧಿ, ರಘುನಂದನ, ತೊಳ್ಪಡಿತ್ತಾಯ ಮುಂತಾದ ಪಾತ್ರಗಳು ಬಹಳ ಅಪ್ಯಾಯವಾಗಿಬಿಡುತ್ತವೆ.

ಇಡೀ ಕಾದಂಬರಿಯನ್ನು ಸಣ್ಣ ಸಣ್ಣ ಘಟನೆಗಳಾಗಿ ತುಂಡರಿಸಿ ಸುಂದರ ಶೀರ್ಷಿಕೆಯೊಡನೆ ಪ್ರಸ್ತುತಪಡಿಸಿರುವ ಕಾರಣ ಕಾದಂಬರಿ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ‘ಅವಳ ಹೆರಳಿನಲ್ಲಿ ಸತ್ತವನ ಬೆರಳು’ , ‘ಒಳಗುದಿಯ ಒಳಗೊಂದು ಬೇಗುದಿ’ ಇತ್ಯಾದಿ ಇಂತಹ ಸಾಂದರ್ಭಿಕ ಶೀರ್ಷಿಕೆಗಳಿಗೆ ಕೆಲವು ಉದಾಹರಣೆಗಳು. ಅಲ್ಲದೆ ಈ ತಂತ್ರದಿಂದ ಪ್ರತಿಯೊಂದು ಘಟನೆಯನ್ನು ಸುಂದರವಾಗಿ ವಿವರಿಸಲು ಲೇಖಕರಿಗೂ ಸಹಾಯವಾಗಿರಬಹುದೆಮ್ಬುದು ನನ್ನ ಅಭಿಪ್ರಾಯ. ಸರ್ವೇಸಾಮಾನ್ಯವಾಗಿ ನಡೆದಿರಬಹುದಾದ ಕೆಲವು ಘಟನೆಗಳನ್ನು ನಾವು ಕಣ್ಣಾರೆ ನೋಡದಿರುವಾಗ ಎಷ್ಟು ವಿಲಕ್ಷಣವಾದ, ವಿಚಿತ್ರವಾದ ಸಾಧ್ಯತೆಗಳನ್ನು ಆ ಘಟನೆಗೆ ಅಂಟಿಸಿಬಿಡುತ್ತೇವೆಮ್ಬುದನ್ನು ಬಹಳ ಮಾರ್ಮಿಕವಾದ ಕೆಲವು ಸನ್ನಿವೇಶಗಳ ಮುಖಾಂತರ ವಿವರಿಸುತ್ತ, ಆ ಸನ್ನಿವೇಶಗಳು ಇತರ ಘಟನೆಗಳಿಗೆ ಹೇಗೆ ಪೂರಕವಾಗುತ್ತದೆಮ್ಬುದನ್ನು ಸಂಕ್ಷಿಪ್ತವಾಗಿ ತೋರ್ಪಡಿಸುವಲ್ಲಿ ಲೇಖಕರ ಜಾಣ್ಮೆ ಎದ್ದು ಕಾಣುತ್ತದೆ.

ಒಟ್ಟಿನಲ್ಲಿ ಕಥಾ ಹಂದರಕ್ಕೆ ಹೊಸ ಹೊಸ ಗಂಟುಗಳನ್ನು ಸೇರಿಸುತ್ತಾ, ಆ ಗಂಟುಗಳು ಗೋಜಲಾಗುವುದರೊಳಗೆ ಅದರ ಒಳಸುಳುಹನ್ನು ಬಿಡಿಸುತ್ತ, ಅಲ್ಲಲ್ಲಿ ಪಾತ್ರಗಳ ಸ್ವವಿಮರ್ಶೆಯ ನೆಪದಲ್ಲಿ ಕೆಲ ವಿಚಾರಗಳನ್ನು ಪ್ರಕಾಶಿಸುತ್ತ ಓದಿಸಿಕೊಂಡು ಹೋಗುವ ಸುಮಾರು ೨೬೦ ಪುಟಗಳ ಮುದ್ದಾದ ಕಾದಂಬರಿ ‘ನದಿಯ ನೆನಪಿನ ಹಂಗು.’ ನೀವೂ ಓದಿ ಇಷ್ಟಪಡುವಿರೆಮ್ಬುದು ನನ್ನ ಅಭಿಮತ.

English translation of the review given above in Kannada:

Review by Yogesh K S

When selecting a book by an unknown author to read, most of the hobby readers would have a slight fear somewhere in mind. The questions like – ‘Is this a good book?’, ‘Will it make a good read ?’, ‘Would I like the writing style?’, etc will put us in a confused state. Normally readers like us have the habit of reading a book only after somebody suggests it.

While picking ‘Nadiya Nenapina Hangu’ by Jogi (Girish Rao Hatwar), I faced the same conundrum. But the name ‘Nadiya nenapina hangu (in debt of the memories of a river)’ and the quote ‘Ella nadigaligoo kadalu iruvudilla (All rivers won’t have a coast)’ attracted me to buy this book. Fortunately as I didn’t have any other book to attract me I bought this book. Hence, I ended up reading a very nice Kannada book after a while and got introduced to a new writer.

After a few days, one midnight when I happened to be free, I just wanted to check out the book. After reading first few lines of the prologue itself, was pretty impressed with these similes. The author says “Novel is like a river. It starts as a small stream which collects several other streams en route and flow unlike a short story which is like hunting and poetry which is like fishing in the ocean of time”. If you have ever tried your hand at writing you can’t help but agree. I continued on to the next page of the novel, only to be surprised to see a heading ‘A story born from death.’ I was bit puzzled and I ran through few more pages only to find that after every 3 pages or so, there are such good headings. Then I realized the perspective of the author when he says “Novel is like a river…” I was still under doubt due to the known fact that most of the times we like only the first few chapters of a novel. But I was proved wrong and the storyline amazed me. I finished the whole book only in two sittings.

The writing style of the author takes a front seat in this novel than the story itself. It doesn’t mean that the story is not good. Unlike other novels where the story flows in just one direction or with respect to only a few characters, author just keeps the environment of the story fixed and keeps introducing new characters and incidents as the story develops. He explains the incidents only to certain extent, moves on to the next by pushing this behind and again connects the previous incidents together later just the way a river would flow.

Generally while explaining an incident in the writings of Poornachandra Tejaswi and Kuvempu, if there are new characters to introduce, they would narrate a short story describing the characteristics of the person. Jogi uses the same technique in this book; only with greater effect as such narratives are short and to the point. Hence the characters of the story namely Niranjana, Sugandhi, Veena, Somayaji, Tolpadittaya, Raghunandana, Narmada, etc., feel closer to heart.

As the writer divides the novel into smaller chunks and give them good suitable headings like ‘Avala Heralinalli Sattavana Beralu (The Dead’s Fingers in Her Curls)’, ‘Olagudiya Olagondu Begudi (The Sadness Inside An Inner Feeling)’, the readability of the novel is enhanced. Also, I feel that it has aided the writer to separately work on narrating individual incidents. When we haven’t seen the happening of even a simple incident, we end up making weird and complicated assumptions regarding the ins and outs of it. The writer illustrates this by expressing many such incidents in the storyline.

Overall by introducing new interesting knots to the story, unraveling them just before they start becoming complicated and forwarding few nice thoughts in name of retrospection of characters, the novel happens to be a very good read comprising of 260 odd pages. It’s my belief that you would also like the book when you read it.